VIDEO: ಪಂದ್ಯ ಮುಗಿಯುತ್ತಿದ್ದಂತೆ ಸ್ಟೇಡಿಯಂನಲ್ಲಿ ಹೊಡೆದಾಡಿಕೊಂಡ ಅಭಿಮಾನಿಗಳು

VIDEO: ಪಂದ್ಯ ಮುಗಿಯುತ್ತಿದ್ದಂತೆ ಸ್ಟೇಡಿಯಂನಲ್ಲಿ ಹೊಡೆದಾಡಿಕೊಂಡ ಅಭಿಮಾನಿಗಳು

ಸಾಂದರ್ಭಿಕ ಚಿತ್ರ


zahir | news18

Updated: January 13, 2019, 10:10 PM IST

ಆಸ್ಟ್ರೇಲಿಯಾದ ಕ್ರಿಕೆಟ್​ ಲೀಗ್​ ಬಿಗ್​ ಬ್ಯಾಶ್​​ನಲ್ಲಿ ಅಭಿಮಾನಿಗಳು ಹೊಡೆದಾಡಿಕೊಂಡ ಘಟನೆ ನಡೆದಿದೆ. ಅಡಿಲೇಡ್​ ಸ್ಟ್ರೈಕರ್ಸ್​ ಹಾಗೂ ಮೆಲ್ಬೋರ್ನ್​ ಸ್ಟಾರ್ಸ್​ ನಡುವಿನ ಪಂದ್ಯದ ಬಳಿಕ ಇಂತಹದೊಂದು ಅಹಿತಕರ ಘಟನೆಗೆ ಓವಲ್​ ಸ್ಟೇಡಿಯಂ ಸಾಕ್ಷಿಯಾಯಿತು.

ಶುಕ್ರವಾರ ಅಡಿಲೇಡ್​ ಸ್ಟ್ರೈಕರ್ಸ್​ ಮತ್ತು ಮೆಲ್ಬೋರ್ನ್​ ಸ್ಟಾರ್ಸ್​ ನಡುವೆ ರೋಚಕ ಪಂದ್ಯ ನಡೆದಿತ್ತು. ಈ ಪಂದ್ಯವನ್ನು ಟ್ರಾವಿಸ್ ಹೆಡ್​ ನೇತೃತ್ವದ ಅಡಿಲೇಡ್ ತಂಡ​ 41 ರನ್​ಗಳಿಂದ ಗೆದ್ದುಕೊಂಡಿದೆ. ಇದರ ಬೆನ್ನಲ್ಲೇ ಗ್ಯಾಲರಿಯಲ್ಲಿದ್ದ ಅಭಿಮಾನಿಗಳ ನಡುವೆ ಕಾದಾಟ ಆರಂಭವಾಗಿದೆ.

ನಿಕ್ ಮೆಂಡಿನ್ಸನ್​ ಮುನ್ನಡೆಸಿದ್ದ ಮೆಲ್ಭೋರ್ನ್​ ತಂಡವನ್ನು ಕಟ್ಟಿ ಹಾಕಲು ರಶೀದ್​ ಖಾನ್​ರಂತಹ ಸ್ಟಾರ್ ಬೌಲರ್​ಗಳನ್ನು ಒಳಗೊಂಡಿರುವ ಅಡಿಲೇಡ್​ ತಂಡ ಯಶಸ್ವಿಯಾಗಿತ್ತು. ಈ ಜಯವನ್ನು ಆಸ್ವಾದಿಸುತ್ತಾ ಗ್ಯಾಲರಿಯಲ್ಲಿದ್ದ ಅಭಿಮಾನಿಯೊಬ್ಬರು ವೀಡಿಯೊ ಮಾಡುತ್ತಿದ್ದರು. ಇದೇ ಸಂದರ್ಭದಲ್ಲಿ ರೊಚ್ಚಿಗೆದ್ದ ಮತ್ತೊಬ್ಬ ಅಭಿಮಾನಿಯು ವೀಡಿಯೊ ಮಾಡುತ್ತಾ ತಂಡದ ಪರ ಘೋಷಣೆ ಕೂಗುತ್ತಿದ್ದ ಅಭಿಮಾನಿಯನ್ನು ಥಳಿಸಿದ್ದಾನೆ.

ಇದನ್ನೂ ಓದಿ: ವಿಚಿತ್ರ ಎನಿಸಿದರೂ ಇದು ಸತ್ಯ: ಈಕೆಗೆ ಪುರುಷರ ಧ್ವನಿ ಮಾತ್ರ ಕೇಳಲ್ವಂತೆ..!ಸ್ಟೇಡಿಯಂನಲ್ಲೇ ಮಾರಾಮಾರಿಗೆ ಇಳಿದ ಇಬ್ಬರು ಅಭಿಮಾನಿಗಳನ್ನು ಇತರರಿಗೆ ನಿಯಂತ್ರಿಸಲಾಗಲಿಲ್ಲ. ಕೂಡಲೇ ಸ್ಥಳಕ್ಕಾಗಮಿಸಿದ ಭದ್ರತಾ ಸಿಬ್ಬಂದಿಗಳು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಸೌತ್ ಆಸ್ಟ್ರೇಲಿಯಾ ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಈ ಹೊಡೆದಾಟದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಬೈಕ್​ ಸವಾರರಿಗೆ ಸಿಹಿ ಸುದ್ದಿ: ಟೆನ್ಶನ್​ ಇಲ್ಲದೆ ಈ ಹೆಲ್ಮೆಟ್​ ಧರಿಸಬಹುದು

ಅತ್ಯುತ್ತಮ ಕ್ರಿಕೆಟ್​ ಅಭಿಮಾನಿಗಳನ್ನು ಹೊಂದಿರುವ ಆಸ್ಟ್ರೇಲಿಯಾದಲ್ಲಿ ಇಂತಹ ಘಟನೆ ನಡೆದಿರುವ ದುರದೃಷ್ಟಕರ ಎಂದು ಆಸ್ಟ್ರೇಲಿಯಾದ ಪತ್ರಿಕೆಗಳು ಈ ಅಹಿತಕರ ಘಟನೆಯನ್ನು ಖಂಡಿಸಿದೆ.

Loading…

ಇದನ್ನೂ ಓದಿ: ಶೇ.98 ರಷ್ಟು ಭಾರತೀಯರು ರಾತ್ರಿಯಲ್ಲಿ ಇದನ್ನು ನೋಡಲು ಇಚ್ಛಿಸುತ್ತಾರಂತೆ..!First published:January 13, 2019