ಮಹೇಂದ್ರ ಸಿಂಗ್ ಧೋನಿ ದಾಖಲೆಯನ್ನು ಸರಿಗಟ್ಟಿದ ರಿಷಭ್ ಪಂತ್

ಮಹೇಂದ್ರ ಸಿಂಗ್ ಧೋನಿ ದಾಖಲೆಯನ್ನು ಸರಿಗಟ್ಟಿದ ರಿಷಭ್ ಪಂತ್

dhoni-pant


zahir | news18

Updated: December 8, 2018, 7:51 PM IST

ಅಡಿಲೇಡ್​ನ ಓವಲ್​ ಮೈದಾನದಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್​​ ಹೊಸ ದಾಖಲೆಗೆ ಸಾಕ್ಷಿಯಾಗಿದೆ. ಟೀಂ ಇಂಡಿಯಾದ ವಿಕೆಟ್​ ಕೀಪರ್​ ರಿಷಪ್​ ಪಂತ್ ಮೊದಲ ಇನಿಂಗ್ಸ್​ನಲ್ಲಿ ಆರು ಕ್ಯಾಚ್​ಗಳನ್ನು ಹಿಡಿಯುವ ಮೂಲಕ ಹೊಸ ಸಾಧನೆ ಮೆರೆದಿದ್ದಾರೆ. ಈ ಮೂಲಕ ಮೊದಲ ಇನಿಂಗ್ಸ್​ನಲ್ಲಿ ಅತೀ ಹೆಚ್ಚು ಕ್ಯಾಚ್ ಪಡೆದ ಭಾರತದ ಕೀಪರ್​ ಎಂಬ ದಾಖಲೆಯನ್ನು ಪಂತ್ ತಮ್ಮ ಹೆಸರಿಗೂ ಬರೆದುಕೊಂಡಿದ್ದಾರೆ.

2009ರಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವೆಲ್ಲಿಂಗ್ಟನ್​ನಲ್ಲಿ ಆಸೀಸ್ ವಿರುದ್ಧ ಆರು ಕ್ಯಾಚ್​ಗಳನ್ನು ಹಿಡಿದು ದಾಖಲೆ ನಿರ್ಮಿಸಿದ್ದರು. ಶನಿವಾರ ಮೊಹಮ್ಮದ್ ಶಮಿ ಎಸೆತದಲ್ಲಿ ಜೋಶ್​ ಹ್ಯಾಜಲ್ವುಡ್ ಕ್ಯಾಚನ್ನು ಪಡೆಯುವುದರೊಂದಿಗೆ ರಿಷಭ್​ ಪಂತ್​ ಧೋನಿ ದಾಖಲೆಯನ್ನು ಸರಿಗಟ್ಟಿದರು.

2014ರಲ್ಲಿ ಟೆಸ್ಟ್​ ಕ್ರಿಕೆಟ್​ಗೆ ಗುಡ್​ಬೈ ಹೇಳಿದ್ದ ಎಂಎಸ್​ ಧೋನಿ ಅವರ ಸ್ಥಾನವನ್ನು ಇತ್ತೀಚೆಗೆ ವೃದ್ಧಿಮಾನ್ ಸಹಾ ತುಂಬಿದ್ದರು. ಆದರೆ ಆಸ್ಟ್ರೇಲಿಯಾ ಪ್ರವಾಸದ ವೇಳೆ ಗಾಯಗೊಂಡಿದ್ದರಿಂದ ಟೂರ್ನಿಯಿಂದ ಹೊರಗುಳಿಯಬೇಕಾಯಿತು. ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ಟೆಸ್ಟ್​ ಪಂದ್ಯದಲ್ಲಿ ಸ್ಥಾನ ಪಡೆದಿರುವ 21ರ ಹರೆಯದ ರಿಷಭ್​ ಪಂತ್ ವೃತ್ತಿಜೀವನದ ಆರಂಭದಲ್ಲೇ ಧೋನಿಯ ದಾಖಲೆಯನ್ನು ಸರಿಗಟ್ಟುವ ಮೂಲಕ ಗಮನ ಸೆಳೆದಿದ್ದಾರೆ.ಇದನ್ನೂ ಓದಿ: ನಿಮ್ಮ ಮೊಬೈಲ್​ನಲ್ಲಿ ಈ ಆ್ಯಪ್​ಗಳಿದೆಯೇ? ಹಾಗಿದ್ರೆ ಅಪಾಯ ಗ್ಯಾರೆಂಟಿ..!

6 ಟೆಸ್ಟ್​​ ಪಂದ್ಯಗಳನ್ನು ಆಡಿರುವ ಪಂತ್ ಒಂದು ಭರ್ಜರಿ ಶತಕದೊಂದಿಗೆ 43.25 ಸರಾಸರಿಯಲ್ಲಿ 346 ರನ್​ ಪೇರಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಮೊದಲ ಇನಿಂಗ್ಸ್​ನಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಪಂತ್ 25 ರನ್​ಗಳಿಸಿದ್ದರು.First published:December 8, 2018