(VIDEO): ಭಾರತ vs ಆಸ್ಟ್ರೇಲಿಯಾ: ಕ್ರಿಕೆಟ್ ಇತಿಹಾಸದಲ್ಲಿ ಇದೇ 'ದಿ ಬೆಸ್ಟ್​​ ರನೌಟ್'

(VIDEO): ಭಾರತ vs ಆಸ್ಟ್ರೇಲಿಯಾ: ಕ್ರಿಕೆಟ್ ಇತಿಹಾಸದಲ್ಲಿ ಇದೇ ‘ದಿ ಬೆಸ್ಟ್​​ ರನೌಟ್’

Pic: Twitter


Vinay Bhat | news18

Updated: December 7, 2018, 12:34 PM IST

ಅಡಿಲೇಡ್​​ನ ಓವಲ್​ ಅಂಗಳದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ಕುಸಿದ ಟೀಂ ಇಂಡಿಯಾಕ್ಕೆ ಆಸರೆಯಾಗಿದ್ದು ಚೇತೇಶ್ವರ್ ಪೂಜಾರ. ಕಡಿಮೆ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಭಾರತಕ್ಕೆ ಚೇತೇಶ್ವರ್​ ಚೈತನ್ಯ ತುಂಬಿದರು. ಪರಿಣಾಮ ಭಾರತ 250ರ ಗಡಿ ಮುಟ್ಟುವಂತಾಯುತು. ಆದರೆ, ದಿನದಾಟದ ಕೊನೆಯಲ್ಲಿ ಅದ್ಭುತ ಇನ್ನಿಂಗ್ಸ್​ ಕಟ್ಟಿದ್ದ ಪೂಜಾರ 123 ರನ್​​ಗೆ ರನೌಟ್​ ಆಗಿದ್ದು ಎಲ್ಲರನ್ನು ಅಚ್ಚರಿಗೊಳಿಸಿತು.

ಮೊದಲ ದಿನದಾಟದ ಕೊನೆ ಕ್ಷಣದಲ್ಲಿ ಸಿಂಗಲ್ ರನ್​ ಕಲೆಹಾಕಲೋಗಿ ಪ್ಯಾಟ್​ ಕಮಿನ್ಸ್​​ ಅವರಿಂದ ರನೌಟ್​ಗೆ ಬಲಿಯಾಗಿ ಪೂಜಾರ ತಮ್ಮ ಇನ್ನಿಂಗ್ಸ್​ ಕೊನೆಗೊಳಿಸಿದರು. ಪ್ಯಾಟ್ ಕಮಿನ್ಸ್​ ಅವರು ಮಾಡಿದ ರನೌಟ್ ಕ್ರಿಕೆಟ್ ಇತಿಹಾಸದಲ್ಲೇ ಶ್ರೇಷ್ಠ ರನೌಟ್ ಎಂದು ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಆ್ಯಡಂ ಗಿಲ್​​ಕ್ರಿಸ್ಟ್​ ಹೇಳಿದ್ದಾರೆ. ಒಬ್ಬ ಬೌಲರ್ 20 ಓವರ್​ ಬೌಲಿಂಗ್ ಮಾಡಿ ದಿನದಾಟ ಅಂತ್ಯವಾಗುತ್ತೆ ಎಂಬೊತ್ತಿಗೆ ಈ ರೀತಿ ರನೌಟ್ ಮಾಡಿದ್ದು ನಿಜಕ್ಕೂ ಅದ್ಭುತ. ಇದು ನಾನು ಕಂಡ ಅತ್ಯುತ್ತಮ ರನೌಟ್ ಎಂದು ಗಿಲ್​​ಕ್ರಿಸ್ಟ್​ ಹೇಳಿದ್ದಾರೆ.

ಇದನ್ನೂ ಓದಿ‘ಕೆ. ಎಲ್. ರಾಹುಲ್​ರನ್ನು ತಂಡದಿಂದ ಕೈ ಬಿಡುವುದು ಸೂಕ್ತ’: ಸುನೀಲ್ ಗವಾಸ್ಕರ್

ಚೇತೇಶ್ವರ್ ಪೂಜಾರ ರನೌಟ್ ಆದ ವಿಡಿಯೋ ಇಲ್ಲಿದೆ ನೋಡಿ… 

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 250 ರನ್​ಗೆ ಆಲೌಟ್ ಆಗಿದೆ. ಬಳಿಕ ತನ್ನ ಮೊದಲ ಇನ್ನಿಂಗ್ಸ್​ ಆರಂಭಿಸಿರುವ ಆಸ್ಟ್ರೇಲಿಯಾ ತನ್ನ ಪ್ರಮುಖ ವಿಕೆಟ್ ಕಳೆದುಕೊಂಡಿದ್ದು, ಸಂಕಷ್ಟಕ್ಕೆ ಸಿಲುಕಿದೆ.



First published:December 7, 2018