ಮುಕೇಶ್‌ ಅಂಬಾನಿ ಪುತ್ರಿ ವಿವಾಹಕ್ಕೆ ಆಗಮಿಸಿದ ಹಿಲರಿ ಕ್ಲಿಂಟನ್

hillary clinton arrives in udaipur to attend pre wedding celebrations of isha ambani anand piramal

ಮುಕೇಶ್‌ ಅಂಬಾನಿ ಪುತ್ರಿ ವಿವಾಹಕ್ಕೆ ಆಗಮಿಸಿದ ಹಿಲರಿ ಕ್ಲಿಂಟನ್
ಉದಯ್‌ಪುರ: ರಿಲಯನ್ಸ್ ಜಿಯೋ ಮುಖ್ಯಸ್ಥ ಹಾಗೂ ಖ್ಯಾತ ಉದ್ಯಮಿ ಮುಕೇಶ್‌ ಅಂಬಾನಿ – ನೀತಾ ಅಂಬಾನಿಯ ಪುತ್ರಿ ಇಶಾ ಅಂಬಾನಿಯ ಮದುವೆ ಕಾರ್ಯಕ್ರಮಗಳು ಇಂದಿನಿಂದಲೇ ಆರಂಭಗೊಂಡಿವೆ. ಡಿಸೆಂಬರ್ 12 ರಂದು ನಡೆಯಲಿರುವ ವಿವಾಹಕ್ಕೂ ಮುನ್ನ ಹಲವು ವಿವಾಹ ಪೂರ್ವ ಕಾರ್ಯಕ್ರಮಗಳು ನಡೆಯುತ್ತಿವೆ. ಹೀಗಾಗಿ ಬಾಲಿವುಡ್ ಸೆಲೆಬ್ರಿಟಿಗಳು, ಕ್ರಿಕೆಟ್ ತಾರೆಯರು ಸೇರಿ ಅಂತಾರಾಷ್ಟ್ರೀಯ ಗಣ್ಯರು ಸಹ ಉದಯ್‌ಪುರದಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳಿಗೆ ಭೇಟಿ ನೀಡುತ್ತಿದ್ದಾರೆ.

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ವಿರುದ್ಧ ಸ್ಪರ್ಧಿಸಿದ್ದ ಬಿಲ್ ಕ್ಲಿಂಟನ್ ಪತಿ ಹಾಗೂ ಹಿಲರಿ ಕ್ಲಿಂಟನ್ ಮುಕೇಶ್‌ ಅಂಬಾನಿ ಪುತ್ರಿಯ ವಿವಾಹ ಪೂರ್ವ ಕಾರ್ಯಕ್ರಮಗಳಿಗೆ ಬಂದಿರುವುದು ಸಹ ವಿಶೇಷ.

ರಾಜಸ್ಥಾನದ ಉದಯ್‌ಪುರದಲ್ಲಿ ನಡೆಯುತ್ತಿರುವ ಇಶಾ ಅಂಬಾನಿ ಹಾಗೂ ಖ್ಯಾತ ಉದ್ಯಮಿಗಳ ಪಿರಾಮಲ್ ಕುಟುಂಬದ ಆನಂದ್‌ ಪಿರಾಮಲ್ ನಡುವಿನ ವಿವಾಹ ಪೂರ್ವ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಹಿಲರಿ ಕ್ಲಿಂಟನ್ ಆಗಮಿಸಿದ್ದಾರೆ. ಸ್ವತ: ಮುಕೇಶ್‌ ಅಂಬಾನಿ ಹಾಗೂ ನೀತಾ ಅಂಬಾನಿ ಹಿಲರಿ ಕ್ಲಿಂಟನ್ ಅನ್ನು ಸ್ವಾಗತಿಸಿದರು.

ಕೆಂಪು ಎಂಬ್ರಾಯಡರಿಯ ಸಾಂಪ್ರದಾಯಿಕ ವೇಷಭೂಷಣದಲ್ಲಿ ಹಿಲರಿ ಕ್ಲಿಂಟನ್ ಭಾರತಕ್ಕೆ ಆಗಮಿಸಿದ್ದು, ಅವರ ಫೋಟೋಗಳು ವೈರಲ್ ಆಗಿದೆ. ಅಮೆರಿಕ ರಾಜಕಾರಣಿ ಮುಕೇಶ್‌ ಅಂಬಾನಿ ಪುತ್ರಿ ಮದುವೆಗೆ ಆಗಮಿಸಿರುವುದು ಹಲವರ ಹುಬ್ಬೇರಿಸಿದೆ. ಇನ್ನು, ಅಮೆರಿಕದ ಖ್ಯಾತ ಸಿಂಗರ್ ಬಿಯಾನ್ಸ್ ಇಶಾ ಅಂಬಾನಿ – ಆನಂದ್ ಪಿರಾಮಲ್ ವಿವಾಹದಲ್ಲಿ ಪರ್ಫಾಮೆನ್ಸ್ ಕೊಡಲಿದ್ದಾರೆ ಎಂದು ತಿಳಿದುಬಂದಿದೆ.